
ಭಾರತೀಯ
ಚಲನಚಿತ್ರ ಉದ್ಯಮ ನೂರು ವರ್ಷ ಪೋರೈಸಿದೆ. ಹೀಗಾಗಿ ಕಳೆದ ಒಂದು ವರ್ಷದಿಂದ
(ಬೆಂಗಳೂರಿನ ಗರುಡಾ ಮಾಲ್ ಸೇರಿದಂತೆ) ಉದ್ಯಮಕ್ಕೆ ಸಂಬಂಧಿಸಿದ ಅನೇಕರು ವಿವಿಧ
ರೀತಿಯಲ್ಲಿ ಆ ಸಂಭ್ರಮ ಆಚರಿಸಿದ್ದಾರೆ. ಅದೇ ರೀತಿ ಬಾಲಿವುಡ್ಡಿನ ವಯೋಕಾಂ 18
ಎಂಬ ನಿರ್ಮಾಣ ಸಂಸ್ಥೆ ಕೂಡ ಸಂಭ್ರಮಾಚರಣೆಯ ಭಾಗವಾಗಿ ಒಂದು ಚಿತ್ರ ನಿರ್ಮಾಣ ಮಾಡಿದೆ.
ಬಾಲಿವುಡ್ಡಿನ ನಾಲ್ಕು ಯುವ ನಿರ್ದೇಶಕರನ್ನ ಕರೆದು ಪ್ರತಿಯೊಬ್ಬರಿಗೂ ಒಂದೂವರೆ ಕೋಟಿ
ರೂಪಾಯಿಗಳ ಬಡ್ಜೆಟ್ ನೀಡಿ ತಲಾ ಇಪ್ಪತ್ತೈದು ನಿಮಿಷಗಳ ಕಿರು ಚಿತ್ರಗಳನ್ನು ಮಾಡಿಸಿ
ಅವುಗಳನ್ನು ಒಟ್ಟುಗೂಡಿಸಿ ''ಮುಂಬೈ ಟಾಕೀಸ್'' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ
.
ಈ ಚಿತ್ರ ಭಾರತೀಯ ಚಿತ್ರರಂಗದ ಎಲ್ಲರೂ ಸೇರಿ ನಿರ್ಮಿಸದೇ ಹೋದರೂ, ಹಾಗೂ ಭಾರತ
ಸರ್ಕಾರ ಈ ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಕೈ ಜೊಡಿಸದಿದ್ದರೂ ಕೂಡ ಇದು ಭಾರತೀಯ
ಚಿತ್ರರಂಗದ ಅಧಿಕೃತ ಶತಮಾನೋತ್ಸವ ಆಚರಣೆಯಂತೆ ಬಿಂಬಿಸಲ್ಪಟ್ಟು ಮೊನ್ನೆ ಶುಕ್ರವಾರ ಮೇ 3
ರಂದು ಚಿತ್ರ ಬಿಡುಗಡೆಯಾಗಿದೆ. 1913 ರ ಮೇ 3 ರಂದು ದಾದಾ ಸಾಹೇಬ್ ಫಾಲ್ಕೆ ಅವರ
ಮೊದಲ ಚಿತ್ರ ''ರಾಜಾ ಹರಿಶ್ಚಂದ್ರ'' ತೆರೆ ಕಂಡಿತ್ತು.
ಹೀಗಾಗಿ ಬಿಡುಗಡೆಯ ದಿನಾಂಕ
ಮತ್ತು ಈ ಚಿತ್ರದಲ್ಲಿನ ನಾಲ್ಕೂ ಕಿರು ಚಿತ್ರಗಳು ಭಾರತೀಯರ ಜೀವನದಲ್ಲಿನ ಸಿನೆಮಾದ
ಮಹತ್ವವನ್ನು ಹೇಳುವ ಕಥೆಗಳೇ ಆಗಿರುವುದರಿಂದ ಇದನ್ನು ಶತಮಾನೋತ್ಸವ ಆಚರಣೆ ಎಂದೇ
ಪರಿಗಣಿಸಬಹುದು. ಆದರೆ ದಾದಾ ಸಾಹೇಬ್ ಫಾಲ್ಕೆ ಅವರ ಸ್ಮರಣೆ ಕೂಡ
ಚಿತ್ರದ ಪ್ರಾರಂಭದಲ್ಲಿ ಇಲ್ಲದೇ ಇರುವುದು ವಿಷಾದನೀಯ. ವಾಸ್ತವವಾಗಿ ದಾದಾ ಸಾಹೇಬ್
ಫಾಲ್ಕೆ ಅವರ ಬಗ್ಗೆಯೇ ಒಂದು ಉತ್ತಮ ಚಿತ್ರ ಮಾಡಬಹುದಾಗಿತ್ತು. (ನಾಲ್ಕು ವರ್ಷಗಳ
ಹಿಂದೆಯೇ ಮರಾಠೀ ಭಾಷೆಯಲ್ಲಿ ದಾದಾ ಸಾಹೇಬ್ ರವರ ಬಗ್ಗೆ ಅತ್ತ್ಯುತ್ತಮ
ಗುಣಮಟ್ಟದ ಚಿತ್ರ ನಿರ್ಮಾಣ ಆಗಿದೆ. ಆದರೆ ಅದು ಶತಮಾನೋತ್ಸವದ ಆಚರಣೆಯ ಅಂಗವಾಗಿ
ಆಗಿರಲಿಲ್ಲ ಮತ್ತು ಅದು ಕೇವಲ ಒಂದು ಪ್ರಾದೇಶಿಕ ಭಾಷಾ ಚಿತ್ರವಾಗಿತ್ತು)
ಹೀಗಾಗಿ ಬಿಡುಗಡೆಯ ದಿನಾಂಕ
ಮತ್ತು ಈ ಚಿತ್ರದಲ್ಲಿನ ನಾಲ್ಕೂ ಕಿರು ಚಿತ್ರಗಳು ಭಾರತೀಯರ ಜೀವನದಲ್ಲಿನ ಸಿನೆಮಾದ
ಮಹತ್ವವನ್ನು ಹೇಳುವ ಕಥೆಗಳೇ ಆಗಿರುವುದರಿಂದ ಇದನ್ನು ಶತಮಾನೋತ್ಸವ ಆಚರಣೆ ಎಂದೇ
ಪರಿಗಣಿಸಬಹುದು. ಆದರೆ ದಾದಾ ಸಾಹೇಬ್ ಫಾಲ್ಕೆ ಅವರ ಸ್ಮರಣೆ ಕೂಡ
ಚಿತ್ರದ ಪ್ರಾರಂಭದಲ್ಲಿ ಇಲ್ಲದೇ ಇರುವುದು ವಿಷಾದನೀಯ. ವಾಸ್ತವವಾಗಿ ದಾದಾ ಸಾಹೇಬ್
ಫಾಲ್ಕೆ ಅವರ ಬಗ್ಗೆಯೇ ಒಂದು ಉತ್ತಮ ಚಿತ್ರ ಮಾಡಬಹುದಾಗಿತ್ತು. (ನಾಲ್ಕು ವರ್ಷಗಳ
ಹಿಂದೆಯೇ ಮರಾಠೀ ಭಾಷೆಯಲ್ಲಿ ದಾದಾ ಸಾಹೇಬ್ ರವರ ಬಗ್ಗೆ ಅತ್ತ್ಯುತ್ತಮ
ಗುಣಮಟ್ಟದ ಚಿತ್ರ ನಿರ್ಮಾಣ ಆಗಿದೆ. ಆದರೆ ಅದು ಶತಮಾನೋತ್ಸವದ ಆಚರಣೆಯ ಅಂಗವಾಗಿ
ಆಗಿರಲಿಲ್ಲ ಮತ್ತು ಅದು ಕೇವಲ ಒಂದು ಪ್ರಾದೇಶಿಕ ಭಾಷಾ ಚಿತ್ರವಾಗಿತ್ತು) ಇದೆಲ್ಲ ಪಕ್ಕಕ್ಕಿಟ್ಟು ಈ ನಾಲ್ಕು ಜನ ನಿರ್ದೇಶಕರ ನಾಲ್ಕು ಕಿರುಚಿತ್ರಗಳ ಈ ಗುಚ್ಛ ಹೇಗಿದೆ ಅಂತ ನೋಡುವುದಾದರೆ.. ಅದು ಒಂದು ಹೊಸ ಅಧ್ಯಾಯದ ಪ್ರಾರಂಭದಂತೆಯೇ ನವನವೀನತೆಯಿಂದ ಕೂಡಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಚಿತ್ರಗಳು ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದೆ ಎಂಬ ಹೊಸ ಭರವಸೆಯನ್ನು ಮೂಡಿಸುವಂತಿದೆ. ನಾಲ್ಕೂ ಕಿರುಚಿತ್ರಗಳು ಉತ್ತಮವಾಗಿವೆ.
ವಿರಾಮದ ನಂತರದ ಮೂರನೇ ಕಿರುಚಿತ್ರವನ್ನು ಝೊಯಾ ಅಖ್ತರ್ ನಿರ್ದೆಶಿಸಿದ್ದಾಳೆ. ಶಾಲೆಗೇ ಹೋಗುವ ಬಾಲಕನೊಬ್ಬ ಕತ್ರಿನಾ ಕೈಫ್ ಡಾನ್ಸ್ ನೋಡಿ ಅದರಿಂದ ಪ್ರೇರಿತನಾಗಿ ಡಾನ್ಸರ್ ಆಗುವ ಕನಸು ಕಟ್ಟಿಕೊಳ್ಳುವ ಕಥೆ ಹೊಂದಿರುವ ಈ ಚಿತ್ರ ಇದು. ಅನೇಕ ಉತ್ತಮ ದೃಶ್ಯಸಂಯೋಜನೆಗಳಿಂದಾಗಿ ಮನಸಿಗೆ ಖುಷಿ ಕೊಡುತ್ತದೆ. ಆದರೆ ಅತಾರ್ಕಿಕವಾಗಿ ಅಂತ್ಯ ಕಾಣುತ್ತದೆ.
ಕೊನೆಯ ಕಿರುಚಿತ್ರ ಅನುರಾಗ್ ಕಶ್ಯಪ್ ಎಂಬ ಅಪ್ಪಟ ದೇಸೀ ಪ್ರತಿಭೆಯ ಕೈ
ಚಳಕದಿಂದ ಮೂಡಿದ್ದು. ಉತ್ತರ ಪ್ರದೇಶದ ಹಳ್ಳಿಯಲ್ಲಿ ಜೀವಿಸುವ ಅಮಾಯಕ ಯುವಕನೊಬ್ಬ ತನ್ನ
ತಂದೆಯ ಆಸೆಯಂತೆ ಅಮಿತಾಭ್ ಬಚ್ಚನ್ ನನನ್ನು ಭೇಟಿಯಾಗಿ ಅವರಿಗೆ ತನ್ನ ತಾಯಿ ಮಾಡಿದ
ಮುರಬ್ಬಾ ಎನ್ನುವ ಖಾದ್ಯ ತಿನ್ನಿಸಿ ಹೋಗಲು ಮುಂಬೈಗೆ ಬರುತ್ತಾನೆ. ಅಮಿತಾಭ್ ಬಚ್ಚನ್
ತಿಂದಮೇಲೆ ಉಳಿದಿರುವ ಎಂಜಲು ''ಮುರಬ್ಬಾ''ವನ್ನು ತಿನ್ನುವುದು ಆ ಯುವಕನ ತಂದೆಯ ಕೊನೆಯ
ಆಸೆಯಾಗಿರುತ್ತದೆ. ಅನುರಾಗ್ ಕಶ್ಯಪ್ ಶೈಲಿಯ ಪಕ್ಕಾ ದೇಸೀ ಸಂಭಾಷಣೆ ಮತ್ತು ನಿರ್ದೇಶನ
ನಗಿಸಿ ನಗಿಸಿ ಸುಸ್ತು ಮಾಡಿ ಹಾಕುತ್ತವೆ. ಆದರೆ ಕಥೆ ಮುಂದುವರೆದಂತೆ ಹಾಸ್ಯ
ವಿಷಾದವಾಗಿ, ಅನುಕಂಪವಾಗಿ ಬದಲಾಗಿ ಪ್ರೇಕ್ಷಕನಿಗೆ ಅದ್ಭುತವಾದ ಸಿನೆಮಾಟಿಕ್
ಅನುಭವವನ್ನು ನೀಡುತ್ತದೆ. ಒಂದು ದೃಶ್ಯದಲ್ಲಿ ಅಮಿತಾಭ್ ಬಚ್ಚನ್ ಸ್ವತಃ
ಕಾಣಿಸುತ್ತಾರೆ.
ಒಮ್ಮೆ ನೋಡಿಬನ್ನಿ ..


No comments:
Post a Comment