ಮೂರು
ವರ್ಷಗಳ ಹಿಂದೆ ಬಿಡುಗಡೆಯಾದ ಉಡಾನ್ ಚಿತ್ರವನ್ನು ನೋಡಿದ ಮೇಲೆ ಆ ನಿರ್ದೇಶಕನ ಮುಂದಿನ
ಚಿತ್ರ ಯಾವಾಗ ಬರುತ್ತದೆ ಅಂತ ನಾನು ಕಾಯುತ್ತಿದ್ದೆ. ಆದರೆ ಅಂತಹ ಯಾವುದೇ ಸುದ್ದಿಗಳು
ಬರದೇ ಹೋದಾಗ ನಿರಾಶನಾಗಿದ್ದೆ. ಎರಡು ತಿಂಗಳುಗಳ ಹಿಂದೆ ''ಲೂಟೆರಾ'' ಎಂಬ ಚಿತ್ರದ
ತುಣುಕು ಕಣ್ಣಿಗೆ ಬಿದ್ದಾಗಲೂ ಕೂಡ ಅದರ ಕಡೆಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಏಕೆಂದರೆ ಆ
ವೀಡಿಯೊ ಟ್ರೈಲರ್ ನಲ್ಲಿದ್ದದ್ದು ರಣವೀರ್ ಸಿಂಗ್ ಮತ್ತು ಸೋನಾಕ್ಷಿ ಸಿನ್ಹಾ. ಈ
ರಣವೀರ್ ಸಿಂಗ್ YRF ಬ್ಯಾನರಿನ ''ಬ್ಯಾಂಡ್ ಬಾಜಾ ಬಾರಾತ್,
ನಂತಹ rom-com ಮಸಾಲಾ ಚಿತ್ರದ ಮೂಲಕ ಎಂಟ್ರಿ ಪಡೆದು ಅಂಥದ್ದೇ ಮತ್ತೊಂದು ಚಿತ್ರ
ಮಾಡಿದ್ದ. ಇನ್ನು ಈ ಸೋನಾಕ್ಷಿ ದಬಾಂಗ್ ಮೂಲಕ ಬೆಳಕಿಗೆ ಬಂದು ಪ್ರಭುದೇವಾ, ಸಲ್ಮಾನ್
ಖಾನ್ ಮತ್ತು ಅಕ್ಷಯ್ ಜೊತೆ ಥೈಯಾ-ಥಕ ಕುಣಿಯುತ್ತಿದ್ದ ಧಡೂತಿ ಸುಂದರಿ. ಇವರಿಬ್ಬರೂ
ಗಾಡ್ ಫಾದರ್ ಗಳ ನೆಲೆಯಲ್ಲಿದ್ದವರು ಮತ್ತು ಮಸಾಲಾ ಚಿತ್ರಗಳ ಮಾರ್ಕೆಟ್ಟಿನಲ್ಲಿ ಬಂದ
ಹೊಸ ಕುದುರೆಗಳು. ಹೀಗಾಗಿ ಆ ಟ್ರೈಲರ್ ಅನ್ನು ಸರಿಯಾಗಿ ಗಮನಿಸಲೂ ಇಲ್ಲ. ಆದರೆ ಹದಿನೈದು
ದಿನಗಳ ಹಿಂದೆ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಬಗ್ಗೆ ಓದುತ್ತಿದ್ದಾಗ ಅಚಾನಕ್ಕಾಗಿ
''ಲೂಟೆರಾ'' ಚಿತ್ರವನ್ನು ವಿಕ್ರಮಾದಿತ್ಯ ಮೊತ್ವಾನೆ ನಿರ್ದೆಶಿಸಿದ್ದಾನೆ ಅಂತ
ತಿಳಿಯಿತು. ಬಿಡುಗಡೆಯಾದ ಮೊದಲ ದಿನವೇ ಎಲ್ಲ ಕೆಲಸ ಬದಿಗೊತ್ತಿ ಚಿತ್ರ ನೊಡಿದೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ''ಉಡಾನ್'' ನೋಡಿದಾಗ ಆದಷ್ಟು ಖುಷಿ ಖಂಡಿತ ಆಗಲಿಲ್ಲ.
ಆದರೆ ಬೇಸರ ಕೂಡ ಆಗಲಿಲ್ಲ.
ಈ ಚಿತ್ರ ಬಿಡುಗಡೆಯಾಗುವ ಮುಂಚೆ ಸೋನಾಕ್ಷಿ ಮತ್ತು ರಣವೀರ್ ಇಬ್ಬರದ್ದು unusual pair ಅನ್ನುವ ಕಾರಣಕ್ಕೆ ಅನೇಕರು ಈ ಚಿತ್ರದ ಬಗ್ಗೆ ಕುತೂಹಲ ಹೊಂದಿದ್ದರೂ ಕೂಡ ಬಾಲಿವುಡ್ ನ ಟಿಪಿಕಲ್ ಮಸಲಾ ಬ್ರಾಂಡಿನ, ಹಾಗೂ ಮಾರ್ಕೆಟ್ಟಿನ ಓಡುವ ಕುದುರೆಗಳಾದ ಇವರಿಬ್ಬರೂ ಇಂತಹ ಚಿತ್ರದಲ್ಲಿ ನಟಿಸುತ್ತಾರೆ ಅನ್ನುವ ಕಲ್ಪನೆಯೂ ಇಂಡಸ್ಟ್ರಿ ಗೆ ಇರಲಿಲ್ಲ. ಚಿತ್ರದ ಬಿಡುಗಡೆಯ ನಂತರ ಒಂದೊಂದಾಗಿ ಎಲ್ಲಾ ಅಭಿಪ್ರಾಯಗಳು ಹೊರಬರುತ್ತಿವೆ. ಯಾಕೆಂದರೆ ಯಾವುದೇ ದೃಷ್ಟಿಕೋನದಿಂದಲೂ ಇದೊಂದು ಬಾಲಿವುಡ್ ನ ಸೂತ್ರಗಳ ಸಿನೆಮಾ ಅಲ್ಲ. ಆದರೆ ಬಾಲಿವುಡ್ ನ ಮೇನ್ ಸ್ಟ್ರೀಮ್ ನ ಮಸಾಲಾ ಮೂಲಕ ಗುರುತಿಸಿಕೊಂಡ ಕಲಾವಿದರು ಮುಖ್ಯ ಪಾತ್ರಗಳಲ್ಲಿ ಇದ್ದಾರೆ. ಸ್ಟಾರ್ ಪ್ಲಸ್ ನ ಸೀರಿಯಲ್ ಗಳ ನಿರ್ಮಾಪಕಿ ಏಕ್ತಾ ಕಪೂರಳ ಬಾಲಾಜಿ ಸಂಸ್ಥೆ ಇದರು ನಿರ್ಮಾಣ ಮಾಡಿದೆ. ಮೊದಲು ಸಂಜಯ್ ಲೀಲಾ ಭನ್ಸಾಲಿ ಜೊತೆ ಕೆಲಸ ಮಾಡಿದ್ದರೂ ಕೂಡ, ಅನುರಾಗ್ ಕಶ್ಯಪ್ ಜೊತೆ ಗುರುತಿಸಿಕೊಂಡ ನಿರ್ದೇಶಕ ಈ ವಿಕ್ರಮ್. ಹೀಗಾಗಿ ಎಲ್ಲ ಕಡೆಯಿಂದ ಒಂದಕ್ಕೊಂದು ತಾಳೆಯಾಗದ ಕಾಂಬಿನೇಶನ್ ಗಳು ಈ ಚಿತ್ರದಲ್ಲಿ ಕೆಲಸ ಮಾಡಿವೆ ಎಂದರೆ ತಪ್ಪಾಗಲಾರದು. ಬಾಲಿವುಡ್ ನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಈ ತಾಳೆಯಾಗದ ಕಾಂಬಿನೇಶನ್ ಗಳು ಸ್ಪಷ್ಟವಾಗಿ ಕನ್ನಡಿ ಹಿಡಿಯುತ್ತವೆ. ನಟ ನಟಿ ನಿರ್ಮಾಪಕ ನಿರ್ದೇಶಕ ಮುಂತಾದ ಎಲ್ಲರಲ್ಲಿಯೂ ತಮ್ಮ ಬೌಂಡರಿಗಳನ್ನು ಮೀರಿ ತಮ್ಮನ್ನು ಸಾಬೀತು ಪಡಿಸುವ, ಹೊಸತನ್ನು ಮಾಡುವ ಉಮೆದಿ ಕಂಡುಬರುತ್ತಿದೆ. ಇಲ್ಲವಾದರೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸುತ್ತ ಅಪ್ಪನ ನೆರಳಲ್ಲಿ ಬೆಳೆಯುತ್ತಿರುವ ಸೋನಾಕ್ಷಿ ಸಿನ್ಹಾಗೆ ಈ ಚಿತ್ರದಲ್ಲಿ ಮೇಕಪ್ ಇಲ್ಲದ ಹಾಗೂ ಅಸ್ಥಮಾ ರೋಗಿಯ ಪಾತ್ರವನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಖಂಡಿತ ಇರಲಿಲ್ಲ. ನಿರ್ದೇಶಕ ವಿಕ್ರಮಾದಿತ್ಯ ಮೊತ್ವಾನೆ ಗೆ ಅನುರಾಗ್ ಕಶ್ಯಪ್ ನಂತಹ ಆಪ್ತ ಗೆಳೆಯನನ್ನು ಬಿಟ್ಟು ಬಲಾಜಿಯಂತಹ ಸಂಸ್ಥೆ ಗೆ ಚಿತ್ರ ಮಾಡಿಕೊಡುವ ಅಗತ್ಯವೂ ಇರಲಿಲ್ಲ. ಮತ್ತು ಏಕ್ತಾ ಕಪೂರ್ ಗೆ ಇಂತಹ ನಿರ್ದೇಶಕರ ಅವಶ್ಯಕತೆಯೂ ಇರಲಿಲ್ಲ. ತಮ್ಮ ಕಂಫರ್ಟ್ ಝೋನ್ ಗಳಿಂದ ಹೊರಬಂದು ಉತ್ತಮವಾದದ್ದನ್ನು ಮಾಡಬಯಸುವ ಮನಸುಗಳಿಂದ ಈ ತರಹದ ಚಿತ್ರಗಳು ಸಾಧ್ಯ. ಅದು ಬಾಲಿವುಡ್ ನಲ್ಲಿ ನಡೆಯುತ್ತಿರುವುದು ಬಹಳ ಸಂತೋಷ ಪಡುವ ವಿಚಾರ.
ಇಂತಹ ಹೊಸಗಾಳಿಯ ಸೂಚನೆಯ ''ಲೂಟೆರಾ'' ಚಿತ್ರದ ಹೆಸರು ''ಡಕಾಯಿತ'' ಎನುವ ಅರ್ಥದೊಂದಿಗೆ ತನ್ನ ವಿಕ್ಷಿಪ್ತತೆಗೆ ನಾಂದಿ ಹಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹ ಹೆಸರು ಕೂಡ unusual ಅನಿಸುವಂಥದ್ದು.
O. Henry's ಅವರ 'The Last Leaf' ಎಂಬ ಕಿರುಗತೆ ಈ ಚಿತ್ರಕ್ಕೆ ಪ್ರೇರಣೆ. ಆದರೆ ಆ ಕಥೆಯನ್ನು ಪೂರ್ತಿಯಾಗಿ ಕಾಪಿ ಹೊಡೆಯದೇ, 1953-54 ರ ಕಾಲಘಟ್ಟದ ಭಾರತದ ಜಮೀನ್ದಾರಿ ಯುಗದ ಅಂತ್ಯವಾಗುವ ಸಮಯದಲ್ಲಿ ನಡೆಯುವ ಘಟನೆಗಳ ಮೂಲಕ ಸುಂದರ ಕಥೆಯೊಂದನು ಚಿತ್ರಿಸಿ ಕೊಟ್ಟಿದ್ದಾನೆ ನಿರ್ದೇಶಕ. ಹೇಳಿಕೊಳ್ಳುವಂಥ ಅದ್ಭುತ ಕಥೆಯೇನಲ್ಲ. ಅಮೀರ್ ಖಾನ್ ನಟಿಸಿದ ''ಫನಾ'' ಚಿತ್ರದ ಕಥೆಗೂ ಇದಕ್ಕೂ ಬಹಳಷ್ಟು ಹೊಲಿಕೆಗಳಿವೆ. ಚಿತ್ರಕಥೆಯೂ ತುಂಬಾ ನಿಧಾನವಾಗಿ ಸಾಗುತ್ತದೆ. ಆದರೆ ಚಿತ್ರದ ಛಾಯಾಗ್ರಹಣ, ವಸ್ತ್ರ ವಿನ್ಯಾಸ, ಕಲಾ ನಿರ್ದೆಶನ ಮುಂತಾದ ಎಲ್ಲ ಅಂಶಗಳು ಹಾಗೂ ಪಾತ್ರಗಳು ಅದ್ಭುತವಾಗಿ ಒಂದಕ್ಕೊಂದು ಹೊಂದಿಕೊಂಡು ನೋಡುಗರನ್ನು 1953-54 ರ ಪಶ್ಚಿಮ ಬಂಗಾಳದ ಮಾಣಿಕ್ ಪುರ ಎಂಬ ಹಳ್ಳಿಗೆ ಕರೆದುಕೊಂಡು ಹೊಗಿಬಿಡುತ್ತವೆ. ದೇವದಾಸ್ ಚಿತ್ರದ ದ್ವನಿಗ್ರಹಣ ವಿಭಾಗದಲಿ ಕೆಲಸ ಮಾಡಿ ಪ್ರಶಸ್ತಿ ಪಡೆದಿದ್ದ ವಿಕ್ರಮ್ ಈ ಚಿತ್ರದ ನಿರ್ದೇಶಕನಾಗಿರುವುದರಿಂದ ಸೌಂಡ್ ಗೆ ವಿಶೇಷ ಮಹತ್ವ ಕೊಡಲಾಗಿದೆ. ''ಕಥೆಯಲ್ಲಿ ಮುಂದೇನಾಗ್ತದೆ?'' ಅಂತಷ್ಟೇ ತಿಳಿದುಕೊಳ್ಳುವುದಕ್ಕಾಗಿ ಸಿನೆಮಾ ನೋಡುವವರಿಗೆ ಇದು ಇಷ್ಟವಾಗಲಿಕ್ಕಿಲ್ಲ. ಏಕೆಂದರೆ ಕಥೆ ಬಹಳ ಸರಳ ಮತ್ತು ಚಿಕ್ಕದಾಗಿದೆ. ಆದರೆ ಅದನ್ನು ಪ್ರಸ್ತುತಪಡಿಸುವಾಗಿನ ಕೆಲಸದ ಗುಣಮಟ್ಟ ಪ್ರೇಕ್ಷಕರಿಗೆ ಒಂದೊಳ್ಳೆಯ ಸಿನೆಮಾಟಿಕ್ ಅನುಭವವನ್ನು ಕೊಡುತ್ತದೆ. ಚಿತ್ರದ ಮೊದಲ ಒಂದು ಘಂಟೆ ಕಾಲ ನಾಯಕನ ಮೂಲ ವೃತ್ತಿ, ಉದ್ದೇಶ ಮುಂತಾದವುಗಳು ಎಲ್ಲಿಯೂ ಬಯಲಾಗದೆ ಒಂದು ಸರಳ ಸುಂದರ ಪ್ರೇಮ ಕಥೆಯಂತೆ ಸರಾಗಿವಾಗಿ ಸಾಗುವ ಚಿತ್ರ ಒಮ್ಮೆಲೇ ಉಸಿರು ಬಿಗಿ ಹಿಡಿದು ನೋಡುವಷ್ಟು ತೀವ್ರವಾಗಿ ಬದಲಾಗುತ್ತದೆ. ವಿರಾಮದ ನಂತರ ಬಂಗಾಳದಿಂದ ಕಾಶೀರಕ್ಕೆ ಬರುವ ಕಥೆ ಒಂದು ಹಂತದಲ್ಲಿ ಬೋರ್ ಅನಿಸುತ್ತದೆ. ಅಂತ್ಯ ಸ್ವಲ್ಪ ಸುದೀರ್ಘ ಅನಿಸಿದರೂ ಕೊನೆಯ ಎರಡು ನಿಮಿಷಗಳಲ್ಲಿ ಎಲ್ಲ ಬೇಸರ ಮರೆಸುವ ದ್ರುಶ್ಯಗಳಿವೆ. ಇದು ನೂರು ಕೋಟಿ ಗಳಿಸುವ ಬಾಲಿವುಡ್ ಸಿನೆಮಾ ಅಲ್ಲ. ವೀಕೆಂಡ್ ನಲ್ಲಿ ಸುಮ್ಮನೆ ಸಿನೆಮಾ ನೋಡುವವರಿಗಾಗಿ ಇದು ಅಲ್ಲವೇ ಅಲ್ಲ. ಅಪರೂಪದ ಸಿನೆಮಾಗಳನ್ನು ನೋಡಿ ಆನಂದಿಸುವ ಸಹೃದಯರು ತಪ್ಪದೆ ನೋಡಬೇಕಾದ ಚಿತ್ರ. ರಣವೀರ್ ಮತ್ತು ಸೋನಾಕ್ಷಿ ಜೊತೆಗೆ ಎಷ್ಟು ಕ್ಯೂಟ್ ಆಗಿ ಕಾಣ್ತಾರೆ ಅಂತ ನೋಡುವ ಆಸೆಯಿಂದ ಬಂದಿದ್ದ ಒಂದಿಪ್ಪತ್ತು ಜನ ಹುಡುಗಿಯರ ಹಿಂಡು ಥೇಟರ್ ನಲ್ಲಿ ನನ್ನ ಹಿಂದಿನ ಸಾಲಿನಲ್ಲಿ ಕುಳಿತಿತ್ತು . ಚಿತ್ರ ನೋಡಿ ಅವರಿಗೆಲ್ಲ ನಿರಾಸೆ ಆಗಿತ್ತು. ಸೂ ಸ್ಯಾಡ್ ಯಾರ್ .. ಅಂತ ಗೊಣಗುತ್ತಿದ್ದರು. ಹೀಗೆ ಪಡ್ಡೆ ಅಭಿಮಾನಿಗಳಿಗೆ ನಿರಾಸೆ ಮಾಡಿದರೂ ಕೂಡ ರಣವೀರ್ ಮತ್ತು ಸೋನಾಕ್ಷಿ ಇಬ್ಬರಿಗೂ ಈ ಚಿತ್ರ ಒಂದು ಮಟ್ಟದ ಗೌರವ ಮತ್ತು ಕೀರ್ತಿಯನು ತಂದು ಕೊಟ್ಟಿದೆ. ಅಷ್ಟು ಅದ್ಭುತವಾಗಿ ಇಬ್ಬರೂ ನಟಿಸಿದ್ದಾರೆ. ಚಿತ್ರದ ಸಂಗೀತದಲ್ಲಿ ಪಕ್ಕಾ ಬೆಂಗಾಲಿ ಫ್ಲೇವರ್ ಇದೆ. ಹಿನ್ನೆಲೆ ಸಂಗೀತವಂತೂ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಹಿನ್ನೆಲೆ ಸಂಗೀತವನ್ನು ಕಥೆ ಹೇಳುವ ತಂತ್ರಗಾರಿಕೆಯಲ್ಲಿ ಹೇಗೆ ಬಳಸಬೇಕು ಮತ್ತು ''ಮೌನ'' ವನ್ನು ಸಿನೆಮಾದಲ್ಲಿ ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬೇಕು ಎಂಬುದನ್ನು ಈ ಚಿತ್ರ ನೋಡಿ ಕಲಿಯಬಹುದು. ಅಷ್ಟು ಸೊಗಸಾಗಿದೆ.
ಮುಝೆ ಛೊಡ್ ದೋ
ಮೇರೆ ಹಾಲ್ ಪೆ
ಜಿಂದಾ ಹ್ಞೂ ಯಾರ್
ಕಾಫೀ ಹೈ
ಕುಛ್ ಮಾಂಗನಾ
ಬಾಕೀ ನಹೀ
ಜೋ ಭೀ ಮಿಲಾ ಕಾಫೀ ಹೈ
ಅಮಿತಾಭ್ ಭಟ್ಟಾಚಾರ್ಯ ಬರೆದ ಇಂತಹ ಸಾಲುಗಳು ಮತ್ತೆ ಮತ್ತೆ ಕಾಡುವಂತಿವೆ
ದೇವಾನಂದ್ ಚಿತ್ರಗಳು ಮತ್ತು ಆ ಕಾಲದ ಹೀರೋಯಿಸಂ ಸನ್ನಿವೇಶಗಳಲ್ಲಿ ಸೊಗಸಾಗಿ ಹೊಸೆಯಲಾಗಿದೆ. ಹಿನ್ನೆಲೆಯಲ್ಲಿ ಬರುವ ಗುರುದತ್ ಅವರ ಮೊದಲ ಚಿತ್ರದ ಹಾಡು ಮತ್ತು ಅವರ ಚಿತ್ರದ ವಿಲನ್ ಪಾತ್ರದ ಪಿ ಕೆ ಸಿಂಗ್ ಎಂಬ ಹೆಸರನ್ನು ಇಲ್ಲಿಯ ಪೋಲೀಸ್ ಅಧಿಕಾರಿಗೆ ಇಡುವ ಮೂಲಕ ವಿಕ್ರಮ್ ಆ ಮೇರು ಕಲಾವಿದರಿಗೆ ಗೌರವ ಸಲ್ಲಿಸಿದ್ದಾರೆ.
ಸತ್ಯಜಿತ್ ರೆ ಅವರ ''ಸೀಮಾಬದ್ಧ'' ಚಿತ್ರದಲ್ಲಿ ನಟಿಸಿದ್ದ ಬೆಂಗಾಲಿ ಲೇಖಕ ಮತ್ತು ನಟ ''ಬರುಣ್ ಚಂದಾ'' ಇಲ್ಲಿ ಮಗಳನ್ನು ತನ್ನ ಜೀವದಂತೆ ಪ್ರೀತಿಸುವ ಮತ್ತು ಜಮೀನ್ದಾರಿಕೆ ಯನ್ನು ಕಳೆದುಕೊಂಡು ಕಂಗಾಲಾಗುವ ಬಂಗಾಳದ ಪುಡಿರಾಜನ ಪಾತ್ರದಲ್ಲಿ ತಮ್ಮ ಖಣ ಖಣಿಸುವ ದ್ವನಿಯೊಂದಿಗೆ ಮರೆಯಲಾಗದ ಪ್ರಭಾವ ಬೀರುತ್ತಾರೆ. ''ಅಂಗ್ರೆಜೊಂ ಸೆ ದೇಶ್ ಆಝಾದ್ ಹುವಾ, ಮಗರ್ ಹಮ್ ಬರ್ಬಾದ್ ಹೊ ಗಯೇ'' ಅನ್ನುವ ಮಾತನ್ನು ನೀವು ಅವರ ಧ್ವನಿಯಲ್ಲೇ ಕೇಳಬೇಕು.